ಘೋಡಾ ಕಟೋರಾ (ಐಮೀ ಮಗಂಡಾ) ಭಾರತದ ಬಿಹಾರ ರಾಜ್ಯದ ರಾಜ್‌ಗೀರ್ ನಗರದ ಸಮೀಪವಿರುವ ನೈಸರ್ಗಿಕ ಸರೋವರವಾಗಿದೆ. ಈ ಸ್ಥಳವು ರಾಜ್‌ಗೀರ್‌ನಲ್ಲಿನ ಅತ್ಯಂತ ಸ್ವಚ್ಛವಾದ ಪ್ರೇಕ್ಷಣೀಯ ಸ್ಥಳಗಳಲ್ಲಿ ಒಂದಾಗಿದೆ. ಈ ಸರೋವರವು ಚಳಿಗಾಲದಲ್ಲಿ ಸೈಬೀರಿಯಾ ಮತ್ತು ಮಧ್ಯ ಏಷ್ಯಾದಿಂದ ವಲಸೆ ಬರುವ ಪಕ್ಷಿಗಳನ್ನು ಆಕರ್ಷಿಸುತ್ತದೆ. ಘೋಡಾ ಕಟೋರಾ ಪದಗಳ ಅಕ್ಷರಶಃ ಅನುವಾದ "ಕುದುರೆ ಬೋಗುಣಿ" ಎಂದು ಆಗಿದೆ. ಸರೋವರದ ಆಕಾರವು ಕುದುರೆಯ ಆಕಾರವನ್ನು ಹೋಲುತ್ತದೆ ಮತ್ತು ಸರೋವರವು ಮೂರು ಬದಿಗಳಲ್ಲಿ ಪರ್ವತಗಳಿಂದ ಸುತ್ತುವರಿಯಲ್ಪಟ್ಟಿದೆ. == ಆಕರ್ಷಣೆಗಳು == ಈ ಸರೋವರವು ಹುಟ್ಟು ಬಳಕೆಯ ನೌಕಾವಿಹಾರ, ಉಪಹಾರ ಮಂದಿರ ಮತ್ತು ಅತಿಥಿ ಕೊಠಡಿಗಳಿಗೆ ಸೌಕರ್ಯವನ್ನು ಹೊಂದಿದೆ. ಬುದ್ಧನ ಒಂದು ಪ್ರತಿಮೆಯು ಸರೋವರದ ಮಧ್ಯದಲ್ಲಿದೆ. ಈ ಪ್ರತಿಮೆಯನ್ನು ನಸುಗೆಂಪು ಮರಳುಗಲ್ಲಿನಿಂದ ನಿರ್ಮಿಸಲಾಗಿದೆ. == ಉಲ್ಲೇಖಗಳು ==